ಮಾವಿನಕಾಯಿ ತೊಕ್ಕು

ಮಾವಿನಕಾಯಿ ತೋಕ್ಕು ಮಾಡುವ ವಿಧಾನ :

ಬೇಕಾಗುವ ಸಾಮಗ್ರಿಗಳು ಮಾವಿನಕಾಯಿ ತೊಕ್ಕು ma-1.ಮಾವಿನಕಾಯಿ,

2.ಸಾಸಿವೆ,

3.ಕಾಶ್ಮೀರಿ ಮೆಣಸಿನಕಾಯಿ,

4.ಬೆಲ್ಲ,.ಉಪ್ಪು,

5.ಅರಿಶಿನಪುಡಿ,

6.ಇಂಗು (ಬಹಳ ಮುಖ್ಯವಾದ ಪದಾರ್ಥ)

ಒಗ್ಗರಣೆಗೆ ಎಣ್ಣೆ ಮತ್ತು ಸಾಸಿವೆ..

ನೀವೇನಾದರೂ ಈ ಬೇಸಿಗೆ ಯಲ್ಲಿ ಮಾವಿನಕಾಯಿ ಯಿಂದ ಏನಾದ್ರು ವಿಶೇಷ ಕಾಧ್ಯ ತಯಾರಿಸಬೇಕೆಂದರೆ ಒಮ್ಮೆ ಈ ರೆಸಿಪೆ ಯನ್ನು ಪ್ರಯತ್ನಿಸಿ ನೋಡಿ ಶುಚಿಯಾಗಿ ರುಚಿಯಾದ ಮನೆಯಲ್ಲಿಯೇ ತಯಾರಿಸಬಹುದಾದ ರುಚಿಕರ ಮತ್ತು ನಾಲಿಗೆಗೆ ಒಳ್ಳೆಯ ಸವಿ ಯನ್ನು ಕೊಡುವ ವಿಶೇಷದಲ್ಲಿ ವಿಶೇಷವಾದ ಈ ಕಾಧ್ಯವನ್ನು ಒಮ್ಮೆ ಪ್ರಯತ್ನಿಸಿ ಇವತ್ತಿನ ಫಾಸ್ಟ್ ಫುಡ್ ಯುಗದಲ್ಲಿ ಹೊರಗಡೆ ತಿನ್ನುಸು ಗಳ್ಳನ್ನು ತಿನ್ನುವ ಬದಲು ಈ ರೀತಿ ಮನೆಯಲ್ಲಿಯೇ ಇಂತಹ ಕಾಧ್ಯ ಗಳನ್ನು ಮಾಡಿ ಮನೆಯಲ್ಲಿಯೇ ಸವಿಯುವುದರಿದ ಅರೋಗ್ಯಕರವಾದ ಮತ್ತು ರುಚಿಕರವಾದ ಹಳ್ಳಿ ಶೈಲಿಯ ಈ ಆಹಾರ ವನ್ನು ನೀವೇ ಸ್ವರಹಹಾ ನಿಮ್ಮ ಕೈಯ್ಯರೆ ಮಾಡಿ ಮನೆಯವರಿಗೆಲ್ಲ ಬಡಿಸುವುದರಿಂದ ಮನಸಿಗೆ ಸಂತೋಷ ಉಲ್ಲಾಸ ಉತ್ಸಾಹ ಉಂಟಾಗುವುದು ಈ ಕಾಧ್ಯವನ್ನು ಪ್ರೀತಿಯಿಂದ ತಯಾರಿಸಿ ಮನೆಯವರೆಲ್ಲರಿಗೂ ಬಡಿಸಿ ನೀವು ಕೂಡ ತಿನ್ನಿರಿ.

ಈ ಬೇಸಿಗೆಯಲ್ಲಿ ಸಿಗುವ ಮಾವಿನಕಾಯಿ ಆಹಾ ಎಂಥ ರುಚಿಕರವಾಗಿರುತದೆ ಇದರಿಂದ ಒಂದು ಒಳ್ಳೆಯ ಗೊಜ್ಜುನು ಮಾಡೋಣ ಇದನ್ನು ಬಿಸಿಯಾದ ಅನ್ನ ದೊಂದಿಗೆ ತಿನ್ನಲು ಬಹಳ ರುಚಿಯಾಗಿರುತದೆ ಹಾಗೆ ಚಪಾತಿ ಮತ್ತು ರೊಟ್ಟಿಯೊಂದಿಗೆ ಸವಿಯ ಬಹುದ ಇಂತಹ ಒಳ್ಳೆಯ ರುಚಿಕರವಾದ ತೋಕ್ಕು ಮಾಡುದು ಹೇಗೆ ಎಂದು ಕೆಳಗೆ ಕೊಟ್ಟಿರುವ ವಿವರಣೆಯೊಂದಿಗೆ ನೋಡೋಣ ಬನ್ನಿ ಇದನ್ನು ಎರಡು ಅಥವಾ ಮೂರು ತಿಂಗಳು ಕಾಲ ಇದನು ಫ್ರಿಡ್ಜ್ ನಲ್ಲಿ ಇಟ್ಟು ಉಪಯೋಗಿಸಬಹುದು, ಹಾಗೆ ಹೊರಗಡೆ ಇಟ್ಟರೆ ಹದಿನೈದು ದಿನಗಳ ಕಾಲ ಇಟ್ಟು ಉಪಯೋಗಿಸಬಹುದು.

ಈ ಮಾವಿನಕಾಯಿ ತೋಕ್ಕನ್ನು ಹೊರಗಡೆ ಹೋಗುವಾಗ ಇದನ್ನು ತೆಗೆದುಕೊಂಡು ಹೋಗಬಹುದು ಮತ್ತೆ ಇದನ್ನು ದೂರದ ಊರಿನಲ್ಲಿ ಪ್ರವಾಸಕ್ಕೆ ಹೋದಾಗ ಮೂರು-ನಾಲ್ಕು ದಿನಗಳ ಕಾಲ ಅಲ್ಲಿಯೇ ಇರುವುದಾದರೂ ಇದನ್ನ ಬಹಳ ಸುಲಭವಾಗಿ ಅನ್ನ ಮಾಡಿಕೊಂಡರೆ ಇದನ್ನು ಬಳಸಿಕೊಳ್ಳಬಹುದು ಸಾಂಬಾರ್  ಇಲ್ಲದಿದ್ದರೂ ಇದನ್ನು ಬಳಸಿಕೊಳ್ಳ ಬಹುದು ಹಾಗಾಗಿ ಈ ರುಚಿ ಕರವಾದ ಮಾವಿನ ಕಾಯಿ ತೋಕ್ಕನ್ನು ಒಮ್ಮೆ ಮಾಡಿ ಪ್ರಯತ್ನಸಿ ಇದರ ಉಪಯೋಗವನ್ನು ಪಡೆದು ಕೊಳ್ಳಿ.ಈ ಮಾವಿನ ಕಾಯಿ ಸೀಸನ್ ಅಲ್ಲಿ ಅಂದರೆ ಈ ಬೇಸಿಗೆ ಕಾಲದಲ್ಲಿ ಇದರ ಉಪಯೋಗವನ್ನು ಪಡೆದುಕೊಳ್ಳಿ ನೀವು ಮತ್ತು ನಿಮ್ಮ ಮನೆಯವರೆಲ್ಲ ಈ ರುಚಿ ಕರವಾಗ ಮಾವಿನ ಕಾಯಿ ತೋಕ್ಕನ್ನು ಸವಿಯಿರಿ ಇದನ್ನು ಬ್ಯಾಚುಲರ್ಸ್ ಗಳು ಕೂಡ ತುಂಬಾ ಸುಲಭವಾಗಿ ತಯಾರಿಸಿಕೊಳ್ಳಬಹುದು ಮತ್ತು ಹೊಸದಾಗಿ ಅಡುಗೆ ಕಲಿಯುವವರು ಕೂಡ ಇದನ್ನು ಅತಿ ಸುಲಭವಾಗಿ ತಯಾರಿಸಿಕೊಳ್ಳಬಹುದು

ಮಾವಿನಕಾಯಿ ತೋಕ್ಕು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ, ಮೊದಲಿಗೆ ತಾಜಾ ಮಾವಿನಕಾಯಿ ತೆಗೆದುಕೊಂಡು ಅದನ್ನು ಚೆನ್ನಾಗಿರುವ ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದು ನಂತರ ಅದನ್ನು ಸಣ್ಣ ಸಣ್ಣ ತುಂಡು ಗಳಾಗಿ ಕತ್ತರಿಸಿಕೊಳ್ಳಬೇಕು ನಂತರ.ಒಂದು ಮಿಕ್ಸಿ ಜಾರಿಗೆ ಕಾಶ್ಮೀರಿ, ಸಾಸಿವೆ ಮೆಣಸಿನಕಾಯಿ ಬೆಲ್ಲ ಉಪ್ಪು ಅರಿಶಿನ ಪುಡಿ, ಇವೆಲ್ಲವನ್ನು ಹಾಕಿ ಸಣ್ಣಗೆ ರುಬ್ಬಿಕೊಳ್ಳಿ, ನಂತರ ಇದಕ್ಕೆ ಸಣ್ಣ ಸಣ್ಣ ತುಂಡುಗಳನ್ನು ಮಾಡಿರುವ ಮಾವಿನಕಾಯಿ ಸೇರಿಸಿಕೊಳ್ಳಿ ಚೆನ್ನಾಗಿ ಸಣ್ಣಗೆ ರುಬ್ಬಿಕೊಳ್ಳಿ.

ಓಲೆ ಮೇಲೆ ಒಂದು ಬಾಣಲೆ ಇಟ್ಟು  ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಅದು ಸ್ವಲ್ಪ ಕಾದ ನಂತರ ಅದಕ್ಕೆ ಸ್ವಲ್ಪ ಸಾಸಿವೆ ಹಾಕಿ ನಂತರ ಸಣ್ಣಗೆ ರುಬ್ಬಿದ ಮಿಶ್ರನವನ್ನು ಸೇರಿಸಿ ಸ್ವಲ್ಪ ಹೊತ್ತು ಕೈ ಬಿಡದೆ ಚೆನ್ನಾಗಿ ಬಾಡಿಸಿ ನಂತರ ಇಂಗಂನ್ನು ಸೇರಿಸಿ ಸ್ವಲ್ಪ ಒತ್ತು ಆಡಿಸಿ, ಒಳೆಯಮೇಲಿಂದ ಇಳಿಸಿ ಮೇಲಿನಿಂದ ಕೆಳಗೆ ಇಳಿಸಿ ತಣ್ಣಗಾದ ನಂತರ ಅದನ್ನು ಬಿಸಿ ಅನ್ನದೊಂದಿಗೆ ಕಲಸಿ ಸವಿರಿ

ಇದನ್ನು ಹೆಚ್ಚು ದಿನಗಳ ಕಾಲ ಬಳಸುವುದಾದರೆ ಒಂದು ಶುದ್ಧವಾದ ಗಾಜಿನ ಬಾಟಲಿ ತೆಗೆದುಕೊಂಡು ತೊಳೆದು ನೀರು ಇಲ್ಲದಂಥರ್ ಒರಸಿ ತೋಕ್ಕು ತಣ್ಣಗೆ ಆಗುವ ತನಕ ಕಾದು ನಂತರ ಅದಕ್ಕೆ ತೋಕ್ಕನ್ನು ಅದಕ್ಕೆ ತುಂಬಿ ಅದಕ್ಕೆ ಬಿಗಿಯಾದ ಮುಚ್ಚಳ ದಿಂದ ಮುಚ್ಚಿ ಅದನ್ನು ಒಂದು ಡ್ರೈ ಪ್ಲೇಸ್ ಅಲ್ಲಿ ಇಡೀ ಇಲ್ಲವಾದರೆ ಫ್ರಿಡ್ಜ್ ನಲ್ಲಿ ಇಡೀ ಇಡೀ ಮೂರು ತಿಂಗಳ ವರೆಗೆ ಉಪಯೋಗಿಸಬಹುದು ಏಕೆಂದರೆ ಇದು ಹಾಳಾಗದಿರಲು ಕಾರಣ ವೇನೆಂದ

ಹಾಳಾಗದಿರಲು ಕಾರಣ:-ಇಂಗು

ಇದಕ್ಕೆ ಇಂಗು ಸೇರಿಸಿರುದರಿಂದ ಇದು ಹೆಚ್ಚು ದಿನಗಳ ಕಾಲ ಉಪಯೋಗಿಸಲು ಬಹುದು, ಇದೇರೀತಿಯ ಒಳ್ಳೆಯ ಅಡುಗೆ ಗಾಗಿ ನಮ್ಮ ವೆಡ್ಸಿತೆ ಅನ್ನು (roy18kannada)ಫಾಲೋ ಮಾಡಿ

ಧನ್ಯವಾದಗಳು

Leave a Comment